School Events

ಕನ್ನಡವೇ ಸತ್ಯ, ಕನ್ನಡವೇ ನಿತ್ಯ

  • 2019-11-02
  • school ground

ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು! ಈ ನುಡಿಗೆ ತಕ್ಕಂತೆ ನಮ್ಮ ಶಾಲೆಯಲ್ಲಿ ೬೪ ನೇ ಕನ್ನಡ ರಾಜೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕನ್ನಡ ಶಿಕ್ಷಕಿಯಾದ ಶ್ರೀಮತಿ ಶ್ವೇತಾ ಶಂಕರ್, ಮಾನ್ಯ ಪ್ರಾಂಶುಪಾಲರಾದ ರೆವರೆಂಡ್ ಫಾದರ್ ಜೋಶಿರವರು ಮತ್ತು ಸಹೋದರಿ ಎಬಿನ್ ರವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಮುಖ್ಯ ಘಟ್ಟವಾದ ಧ್ವಜಾರೋಹಣ ಮುಖ್ಯ ಅಥಿತಿಗಳ ನೇತೃತ್ವದಲ್ಲಿ ನಡೆಯಿತು ನಂತರ ಶಾಲಾ ಮಕ್ಕಳು ನಾಡ ಗೀತೆಯನ್ನು ಹಾಡಿದರು. ಈ ದಿನದ ಮಹತ್ವವನ್ನು ಕುರಿತು ಎರಡನೇ ಹಾಗೂ ಒಂಬತ್ತನೆಯ ತರಗತಿಯ ವಿದ್ಯಾರ್ಥಿಗಳು ಕನ್ನಡನಾಡಿನ ಹಿರಿಮೆ ಗರಿಮೆಯನ್ನು ತಿಳಿಸಿದರು. ಹಾಗೂ ನೃತ್ಯವೃಂದದವರು ಕನ್ನಡದ ಗತ ವೈಭವದ ವೈಶಿಷ್ಟ್ಯವನ್ನು ಸಾರುವ ಗೀತೆಗೆ ನೃತ್ಯಮಾಡಿದರು. ಮುಖ್ಯ ಅತಿಥಿಗಳು ಕರ್ನಾಟಕ ಏಕೀಕರಣದ ಮಹತ್ವವನ್ನು ವಿವರಿಸಿ, "ಕನ್ನಡವನ್ನು ಉಳಿಸಿ, ಬೆಳೆಸಿ ಎನ್ನುವುದಕ್ಕೆ ಬದಲು ಕನ್ನಡವನ್ನು ಮೊದಲು ಬಳಸಿ" ಎಂದರು. ಶಾಲಾ ಪ್ರಾಂಶುಪಾಲರು ಮಕ್ಕಳಿಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿದರು. ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು !