ಕನ್ನಡವೆಂಬುದು ಬರಿ ಶಬ್ದವಲ್ಲ
ಅದು ಒಂದು ಜ್ಞಾನ ಭಂಡಾರ
ಕರ್ನಾಟಕವೆಂಬುದು ಬರಿ ನಾಡಲ್ಲ ವಿವಿಧತೆಯಲ್ಲಿ ಏಕತೆಯ ಸಾಗರ
ನಮ್ಮ ಸೈಂಟ್ ಕ್ಲಾರೆಟ್ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ೧ ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ನಮ್ಮ ಶಾಲೆಯ ಪ್ರೌಢಶಾಲಾ ವಿಭಾಗದ ಉಪ ಪ್ರಾಚಾರ್ಯರಾದ ರೆವರೆಂಡ್ ಸಿಸ್ಟರ್ ಸ್ಟೆಫಿ ಥಾಮಸ್ ರವರು ನಾಡದೇವಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಗಳು ಕನ್ನಡ ರಾಜ್ಯೋತ್ಸವ ಆಚರಣೆಯ ಮಹತ್ವವನ್ನು ತಿಳಿಸಿ ಸರ್ವರಿಗೂ ಶುಭಾಶಯ ಕೋರಿದರು. ನಾಡಿನ ಹಿರಿಮೆಯನ್ನು ಸಾರುವ ಸಮೂಹ ಗೀತೆಗಳು, ನೃತ್ಯ , ಕಿರು ನಾಟಕ ಭರತನಾಟ್ಯ ಸರ್ವರನ್ನು ರಂಜಿಸಿತು.
ಪ್ರಾಚಾರ್ಯರಾದ ರೆವರೆಂಡ್ ಫಾದರ್ ಅಬ್ರಹಾಮ್ ರವರು ಮತ್ತು ಪ್ರಾಥಮಿಕ ಶಾಲಾ ವಿಭಾಗದ ಉಪ ಪ್ರಾಚಾರ್ಯರಾದ ಶ್ರೀಮತಿ ಶರ್ಲಿ ಜೋಸೆಫ್ ರವರು ಪ್ರಾಥಮಿಕ ವಿಭಾಗದ ಸಂಯೋಜಕರಾದ ಶ್ರೀಮತಿ ಶಾಲಿ ವರ್ಗೀಸ್ ರವರು, ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕರಾದ ಜೋಸ್ ಫಿನ್ ಫರ್ನಾಂಡೊರವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ನಿರೂಪಣೆ ,ಭಾಷಣ ,ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯಿತು.